ಪ್ರಪಂಚದಾದ್ಯಂತ ಕೋಟ್ಯಂತರ ಜನರು ಬಳಸುತ್ತಿರುವ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಪ್ ಮತ್ತೊಮ್ಮೆ ಬಳಕೆದಾರರಿಗೆ ಶುಭವಾರ್ತೆ ನೀಡಿದೆ. ಈ ವಾರ ವಾಟ್ಸಪ್ ಒಂದೇ ಬಾರಿ ಹಲವಾರು ಪ್ರಮುಖ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡುತ್ತಿದೆ.
ಈ ಅಪ್‌ಡೇಟ್‌ಗಳಲ್ಲಿ ಕಾಲ್ಸ್, ಚಾಟ್ಸ್, ಗ್ರೂಪ್ ವಿಡಿಯೋ ಕಾಲ್ಸ್, ಡೆಸ್ಕ್‌ಟಾಪ್ ಅನುಭವ ಮತ್ತು ಮೆಟಾ AI ಸಂಬಂಧಿಸಿದ ದೊಡ್ಡ ಅಪ್‌ಗ್ರೇಡ್‌ಗಳು ಸೇರಿವೆ. ಕಳೆದ ಕೆಲವು ಸಮಯದಿಂದ ಬೀಟಾ ಆವೃತ್ತಿಯಲ್ಲಿ ಪರೀಕ್ಷಿಸಲಾಗುತ್ತಿದ್ದ ಈ ಫೀಚರ್‌ಗಳನ್ನು ಈಗ ಹಬ್ಬಗಳ ಸೀಸನ್ ಅನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಬಳಕೆದಾರರಿಗೆ ಬಿಡುಗಡೆ ಮಾಡಲಾಗುತ್ತಿದೆ.
ಈ ಹೊಸ ಬದಲಾವಣೆಗಳೊಂದಿಗೆ ವಾಟ್ಸಪ್ ಕೇವಲ ಮೆಸೇಜಿಂಗ್ ಆ್ಯಪ್ ಆಗಿರದೆ, ಸಂಪೂರ್ಣ ಕಮ್ಯುನಿಕೇಶನ್ ಮತ್ತು ಕ್ರಿಯೇಟಿವ್ ಪ್ಲಾಟ್‌ಫಾರ್ಮ್ ಆಗಿ ರೂಪಾಂತರಗೊಳ್ಳುತ್ತಿದೆ. ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ದಿನನಿತ್ಯದ ಸಂವಹನವನ್ನು ಇನ್ನಷ್ಟು ಸುಲಭ, ವೇಗ ಮತ್ತು ಆಕರ್ಷಕವಾಗಿಸುವುದೇ ಈ ಅಪ್‌ಡೇಟ್‌ಗಳ ಮುಖ್ಯ ಉದ್ದೇಶವಾಗಿದೆ.
ಮಿಸ್ ಆದ ಕಾಲ್‌ಗಳಿಗೆ ವಾಯ್ಸ್‌ಮೇಲ್.
ಇದೀಗ ವಾಟ್ಸಪ್‌ನಲ್ಲಿ ವಾಯ್ಸ್‌ಮೇಲ್ ಫೀಚರ್ ಲಭ್ಯವಾಗಿದೆ. ನೀವು ಯಾರಿಗಾದರೂ ವಾಟ್ಸಪ್ ಕಾಲ್ ಮಾಡಿದಾಗ ಅವರು ಕರೆ ಸ್ವೀಕರಿಸದಿದ್ದರೆ, ಒಂದೇ ಕ್ಲಿಕ್‌ನಲ್ಲಿ ವಾಯ್ಸ್ ಅಥವಾ ವಿಡಿಯೋ ಮೆಸೇಜ್ ರೆಕಾರ್ಡ್ ಮಾಡಿ ಕಳುಹಿಸಬಹುದು. ಎದುರಿನ ವ್ಯಕ್ತಿ ನಂತರ ತನ್ನ ಸಮಯಕ್ಕೆ ತಕ್ಕಂತೆ ಅದನ್ನು ನೋಡಿ ಅಥವಾ ಕೇಳಿ ಪ್ರತಿಕ್ರಿಯಿಸಬಹುದು.
ವಿಶೇಷವಾಗಿ ಬ್ಯುಸಿ ಪ್ರೊಫೆಷನಲ್‌ಗಳಿಗೆ ಇದು ಬಹಳ ಉಪಯುಕ್ತವಾದ ಫೀಚರ್.
ವಾಯ್ಸ್ ಚಾಟ್‌ಗಳಲ್ಲಿ ಎಮೋಜಿ ರಿಯಾಕ್ಷನ್
ವಾಯ್ಸ್ ಚಾಟ್ ವೇಳೆ ಮಾತು ಮಧ್ಯೆ ತೊಡಗಿಸದೇ, ಎಮೋಜಿಗಳ ಮೂಲಕ ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಬಹುದು. ಗ್ರೂಪ್ ವಾಯ್ಸ್ ಚಾಟ್‌ಗಳಲ್ಲಿ ಇದು ಇನ್ನಷ್ಟು ಉಪಯುಕ್ತವಾಗಿದ್ದು, ಸಂಭಾಷಣೆಯನ್ನು ಹೆಚ್ಚು ನೈಸರ್ಗಿಕ ಮತ್ತು ಮನರಂಜನೆಯಾಗಿಸುತ್ತದೆ.
ವಾಯ್ಸ್ ಚಾಟ್ ವೇಳೆ ಮಾತು ಮಧ್ಯೆ ತೊಡಗಿಸದೇ, ಎಮೋಜಿಗಳ ಮೂಲಕ ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಬಹುದು. ಗ್ರೂಪ್ ವಾಯ್ಸ್ ಚಾಟ್‌ಗಳಲ್ಲಿ ಇದು ಇನ್ನಷ್ಟು ಉಪಯುಕ್ತವಾಗಿದ್ದು, ಸಂಭಾಷಣೆಯನ್ನು ಹೆಚ್ಚು ನೈಸರ್ಗಿಕ ಮತ್ತು ಮನರಂಜನೆಯಾಗಿಸುತ್ತದೆ.
ಗ್ರೂಪ್ ವಿಡಿಯೋ ಕಾಲ್‌ಗಳಲ್ಲಿ Speaker Spotlight
ಗ್ರೂಪ್ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿರುವ ವ್ಯಕ್ತಿ ಸ್ವಯಂಚಾಲಿತವಾಗಿ ಸ್ಕ್ರೀನ್ ಮೇಲೆ ಪ್ರಮುಖವಾಗಿ ಕಾಣಿಸುವ Speaker Spotlight ಫೀಚರ್ ಪರಿಚಯಿಸಲಾಗಿದೆ.
ಆಫೀಸ್ ಮೀಟಿಂಗ್, ಆನ್‌ಲೈನ್ ಕ್ಲಾಸ್ ಮತ್ತು ಫ್ಯಾಮಿಲಿ ಕಾಲ್‌ಗಳಿಗೆ ಇದು ತುಂಬಾ ಸಹಾಯಕ.
Meta AIಗೆ ದೊಡ್ಡ ಅಪ್‌ಗ್ರೇಡ್
ವಾಟ್ಸಪ್‌ನಲ್ಲಿರುವ Meta AI ಈಗ ಇನ್ನಷ್ಟು ಶಕ್ತಿಶಾಲಿಯಾಗಿದ್ದು, Midjourney ಮತ್ತು Flux ಮುಂತಾದ ಕ್ರಿಯೇಟಿವ್ ಟೂಲ್ಸ್‌ಗೆ ಸಪೋರ್ಟ್ ನೀಡುತ್ತಿದೆ.
ಹಬ್ಬ, ಜನ್ಮದಿನ, ಶುಭಾಶಯ ಕಾರ್ಡ್‌ಗಳನ್ನು ಸುಲಭವಾಗಿ ತಯಾರಿಸಬಹುದು. ಜೊತೆಗೆ ಸರಿಯಾದ ಪ್ರಾಂಪ್ಟ್ ನೀಡಿದರೆ ಫೋಟೋವನ್ನು ಚಿಕ್ಕ ವಿಡಿಯೋ ಆಗಿಯೂ ಪರಿವರ್ತಿಸಬಹುದು. ಇದು ಕಂಟೆಂಟ್ ಕ್ರಿಯೇಟರ್‌ಗಳಿಗೆ ದೊಡ್ಡ ಪ್ಲಸ್.
ಡೆಸ್ಕ್‌ಟಾಪ್ ಮತ್ತು ವೆಬ್ ವಾಟ್ಸಪ್‌ಗೆ Media Tab
ಹೊಸ Media Tab ಮೂಲಕ ಚಾಟ್‌ಗಳಲ್ಲಿರುವ ಫೋಟೋ, ವಿಡಿಯೋ, ಡಾಕ್ಯುಮೆಂಟ್ ಮತ್ತು ಲಿಂಕ್‌ಗಳನ್ನು ಒಂದೇ ಜಾಗದಲ್ಲಿ ನೋಡಬಹುದು.
Mac, Web ಮತ್ತು Desktop ವಾಟ್ಸಪ್ ಬಳಕೆದಾರರಿಗೆ ಇದು ತುಂಬಾ ಉಪಯುಕ್ತ.
