1. ಆಕರ್ಷಕ ಥಂಬ್‌ನೈಲ್ಸ್‌ಗಾಗಿ Canva (ಕ್ಯಾನ್ವಾ) ತುಂಬಾ ಉಪಯುಕ್ತ.
YouTube ವೀಡಿಯೊಗಳಿಗೆ ಆಕರ್ಷಕ ಥಂಬ್‌ನೈಲ್ಸ್ ಬಳಸುವುದರಿಂದ ವೀಕ್ಷಕರು ವೀಡಿಯೊ ಮೇಲೆ ಕ್ಲಿಕ್ ಮಾಡಲು ಸಹಾಯವಾಗುತ್ತದೆ. ನಮಗೆ ಆಕರ್ಷಕವಾಗಿ ಇಮೇಜ್‌ಗಳನ್ನು ಮಾಡಲು ಬರುವುದಿಲ್ಲ ಅಥವಾ Photoshop ನಂತಹ ಸಾಫ್ಟ್‌ವೇರ್‌ಗಳನ್ನು ಬಳಸಲು ತಿಳಿದಿಲ್ಲ ಎನ್ನುವವರಿಗೆ Canva ತುಂಬಾ ಉಪಯುಕ್ತವಾಗಿದೆ.
Canva ಆನ್‌ಲೈನ್ ಟೂಲ್‌ನಲ್ಲಿ ವಿವಿಧ ರೀತಿಯ ಫಾಂಟ್‌ಗಳು, ಉತ್ತಮ ಹಿನ್ನೆಲೆ ಚಿತ್ರಗಳು (Background Images) ಮತ್ತು ಗ್ರಾಫಿಕ್ಸ್ ಸಿಗುತ್ತವೆ. ಇವುಗಳನ್ನು ಬಳಸಿಕೊಂಡು YouTube ಥಂಬ್‌ನೈಲ್ಸ್ ಅನ್ನು ಆಕರ್ಷಕವಾಗಿ ಮಾಡಬಹುದು. ವೆಬ್‌ಸೈಟ್‌ಗಳ ಟೈಟಲ್ ಇಮೇಜ್‌ಗಳಿಗೆ ಮತ್ತು ಜಾಹೀರಾತು ಬ್ಯಾನರ್‌ಗಳಿಗೂ ಈ ವೆಬ್‌ಸೈಟ್‌ನಲ್ಲಿ ಉಚಿತವಾಗಿ ವಿನ್ಯಾಸ ಮಾಡಿಕೊಳ್ಳಬಹುದು.
ಹೆಚ್ಚಿನ ಫೀಚರ್‌ಗಳಿಗಾಗಿ ವೆಬ್‌ಸೈಟ್:
2. ಹಿನ್ನೆಲೆ ಸಂಗೀತಕ್ಕಾಗಿ (Background Music) YouTube ಆಡಿಯೋ ಲೈಬ್ರರಿ.
ವೀಡಿಯೊಗಳಿಗೆ ಉತ್ತಮ ಹಿನ್ನೆಲೆ ಸಂಗೀತವನ್ನು ಬಳಸುವುದು ಕೂಡ ಮುಖ್ಯ. ಒಳ್ಳೆಯ ಸಂಗೀತವನ್ನು ಕೇಳುತ್ತಾ ವೀಡಿಯೊವನ್ನು ಹೆಚ್ಚು ಸಮಯ ನೋಡುವ ಸಾಧ್ಯತೆಯಿದೆ. ಇದರಿಂದ ಹೊಸದಾಗಿ YouTube ಮಾಡುವವರಿಗೆ Watch Hours ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ.
YouTube ಮ್ಯೂಸಿಕ್ ಲೈಬ್ರರಿಯಲ್ಲಿ ಕೆಲವು ಮ್ಯೂಸಿಕ್ ಟ್ರ್ಯಾಕ್‌ಗಳನ್ನು ಬಳಸಬೇಕೆಂದರೆ, ವೀಡಿಯೊ ವಿವರಣೆಯಲ್ಲಿ (Description) ಆಲ್ಬಮ್ ವಿವರಗಳನ್ನು ಮತ್ತು ಕ್ರೆಡಿಟ್ಸ್ ಅನ್ನು ಕಡ್ಡಾಯವಾಗಿ ಬರೆಯಬೇಕಾಗುತ್ತದೆ. ಕೆಲವು ರಾಯಲ್ಟಿ ಫ್ರೀ ಮ್ಯೂಸಿಕ್ ವೆಬ್‌ಸೈಟ್‌ಗಳು (ಉದಾಹರಣೆಗೆ
3. YouTube ವೀಡಿಯೊಗಳಿಗೆ ಕೀವರ್ಡ್‌ಗಳು (Keywords) ಬಹಳ ಮುಖ್ಯ.
YouTube ಕ್ರಿಯೇಟರ್‌ಗಳು ವೀಡಿಯೊಗಳಿಗೆ ಕೀವರ್ಡ್‌ಗಳನ್ನು ಕಡ್ಡಾಯವಾಗಿ ಹಾಕಬೇಕು. ವೀಕ್ಷಕರು ವೀಡಿಯೊಗಾಗಿ ಸರ್ಚ್ (Search) ಮಾಡುವಾಗ ಕೀವರ್ಡ್‌ಗಳನ್ನೇ ಬಳಸುತ್ತಾರೆ.
ಆದ್ದರಿಂದ ಸರಿಯಾದ ಕೀವರ್ಡ್‌ಗಳನ್ನು ವೀಡಿಯೊಗೆ ತಕ್ಕಂತೆ ಹಾಕದಿದ್ದರೆ ಸರ್ಚ್‌ನಲ್ಲಿ ನಮ್ಮ ವೀಡಿಯೊ ಕಾಣಿಸುವುದಿಲ್ಲ. ವೀಡಿಯೊಗೆ ಸರಿಯಾದ ಕೀವರ್ಡ್‌ಗಳು ತಿಳಿಯದಿದ್ದರೆ TubeBuddy ಯಂತಹ ಟೂಲ್ಸ್ ತುಂಬಾ ಸಹಾಯ ಮಾಡುತ್ತವೆ.
TubeBuddy ಗೂಗಲ್ ಕ್ರೋಮ್ ಎಕ್ಸ್‌ಟೆನ್ಶನ್ (Extension) ಅನ್ನು ಬ್ರೌಸರ್ ಜೊತೆ ಲಿಂಕ್ ಮಾಡಿಕೊಳ್ಳಬೇಕು. ಇದಕ್ಕೆ YouTube ಖಾತೆಯ ಅನುಮತಿ (Permission) ನೀಡಬೇಕಾಗುತ್ತದೆ.
ನಾವು ಮಾಡುತ್ತಿರುವ ವೀಡಿಯೊದಂತೆಯೇ ಇರುವ ಜನಪ್ರಿಯ ವೀಡಿಯೊವನ್ನು ಓಪನ್ ಮಾಡಿದರೆ ಸಾಕು, ಬಲಬದಿಯಲ್ಲಿ ಆ ವೀಡಿಯೊದ ಎಲ್ಲಾ ವಿವರಗಳ ಜೊತೆಗೆ ಕೀವರ್ಡ್‌ಗಳು ಕೂಡ ಡಿಸ್ಪ್ಲೇ ಆಗುತ್ತವೆ.
ನಮ್ಮ ವೀಡಿಯೊಗೆ ಸಂಬಂಧಿಸಿದ ಸರಿಯಾದ ಕೀವರ್ಡ್‌ಗಳು ಏನೆಂದು ತಿಳಿದು, ಅವುಗಳನ್ನು ನಮ್ಮ ವೀಡಿಯೊಗಳಲ್ಲಿ ಬಳಸಿಕೊಳ್ಳಬಹುದು.
